ಸ್ಪಂದನ ಸೇವಾ ಟ್ರಸ್ಟ್

12-12-2013ರಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್. ಮುನಿರಾಜುರವರ 56ನೇ ಹುಟ್ಟು ಹಬ್ಬದ ಸಮಾರಂಭವನ್ನು ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಆರ್.ಆಶೋಕ್‍ರವರಿಗೆ ಸನ್ಮಾನ ಮಾಡಲಾಯಿತು. ಹಾಗೂ ಶಾಸಕರಾದ ಶ್ರೀ ಎಸ್.ಮುನಿರಾಜುರವರಿಗೆ ಅದ್ದೂರಿ ಸ್ವಾಗತ ಹಾಗೂ ಸನ್ಮಾನವನ್ನು ದಿನಾಂಕ:12-12-2013ರ ಸಂಜೆ ಸುಂದರವಾದ ವೇದಿಕೆಯ ಮೇಲೆ ರಸ ಮಂಜರಿ ಕಾರ್ಯಕ್ರಮದ ಜೊತೆಗೆ ನಡೆಸಲಾಯಿತು. ಇದರ ಜೊತೆಗೆ ನಾಲ್ಕು ಸಾವಿರ ಜನಕ್ಕೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಎಲ್ಲಾ ಕಾರ್ಯಕ್ರಮಗಳು ಮಲ್ಲಸಂದ್ರ ವಾರ್ಡ್‍ನ ಬಿ.ಜೆ.ಪಿ ಅಧ್ಯಕ್ಷರಾದ ಶ್ರೀ ಎನ್.ಲೋಕೇಶ್‍ರವರ ಘನ ಅಧ್ಯಕ್ಷತೆಯಲ್ಲಿ ಸುಗಮವಾಗಿ ನೇರವೇರಿದವು. ಈ ಸಂದರ್ಭದಲ್ಲಿ ವಾರ್ಡ್ ನಂ-13ರ ಸಮಸ್ತ ಜನತೆಗೆ ಅವರ ಸೇವೆಗಾಗಿ "ಭಾರತೀಯ ಜನತಾಪಾರ್ಟಿ ಕಾರ್ಯಲಯ"ವನ್ನು ಅಧಿಕೃತವಾಗಿ ಉದ್ಘಟನೆ ಮಾಡಲಾಯಿತು. ಇದರ ಜೊತೆಯಲ್ಲೇ ಆರಂಭವಾದ "ಸ್ಪಂದನ ಸೇವಾ ಟ್ರಸ್ಟ್" ವತಿಯಿಂದ ಅನೇಕಾ ಅಭಿವೃದ್ದಿ ಕಾರ್ಯಗಳನ್ನು ರೂಪಿಸಲಾಗಿದೆ.

1) ಟ್ರಸ್ಟ್ ವತಿಯಿಂದ ಉಚಿತ ಕುಡಿಯುವ ನೀರು ಪೊರೈಸುವ ಎರಡು ಟ್ಯಾಂಕರ್‍ಗಳನ್ನು ಬಿಡುಗಡೆ ಮಾಡಲಾಯಿತು.
2) 400 ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿಯನ್ನು ನೀಡಲಾಗುತ್ತಿದೆ.
3) ಮಹಿಳೆಯರಿಗೆ ಉಚಿತ ಬ್ಯೂಟಿಷಿಯನ್ ತರಬೇತಿಯನ್ನು ನೀಡಲಾಗುತ್ತಿದೆ.
4) ಉಚಿತ ಇಂಗ್ಲೀಷ್ ಕಲಿಕಾ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ.
5) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮತ್ತು ಬಿ.ಬಿ.ಎಂ.ಪಿ ವತಿಯಿಂದ ದೊರೆಯುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗೂ ಮಾಹಿತಿ ಮಾರ್ಗದರ್ಶನವನ್ನು ತಿಳಿದುಕೊಳ್ಳಬಹುದು.
6) ವಾರ್ಷಿಕ ವಿವರಗಳನ್ನು ಒಳಗೊಂಡ ಪಂಚಾಂಗ ಸಹಿತ ಕ್ಯಾಲೆಂಡರ್ ಮತ್ತು ಟೇಬಲ್ ಕ್ಯಾಲೆಂಡರ್‍ಗಳನ್ನು ಬಿಡುಗಡೆ ಮಾಡಲಾಯಿತು.

ಮಲ್ಲಸಂದ್ರ ವಾರ್ಡಿನ ನಿಸರ್ಗ ಸ್ವಯಂ ಸೇವಾಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಮತ್ತು ಸ್ಪಂದನ ಟ್ರಸ್ಟ್ ವತಿಯಿಂದ ನೇತ್ರದಾನವನ್ನು ನಡೆಸಲಾಗಿತ್ತು.

ಶ್ರೀ ಟಿ.ಜಿ. ವೆಂಕಟರಮಣ್ಣಯ್ಯನವರು:-

ಜನಸೇವೆಗೆ ಪಣತೊಟ್ಟು ನಿಂತಿರುವ ಜನಪರ ಜನನಾಯಕ ನಿವೃತ ಪೋಲಿಸ್ ಅಧಿಕಾರಿ ಶ್ರೀ ಯುತ ಟಿ.ಜಿ.ವೆಂಕಟರಮಣಯ್ಯನವರು ವೃತ್ತಿಯಲ್ಲಿ ಸಬ್‍ಇನ್‍ಸ್ಪೆಕ್ಟರಾಗಿ 36 ವರ್ಷಗಳು ಕಾಲ ಬೆಂಗಳೂರು ನಗರದಲ್ಲಿ ಶಿಸ್ತಿನ ಸಿಪಾಯಿಯಾಗಿ ಪ್ರಾಮಣಿಕ ಸೇವೆಸಲ್ಲಿಸಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪೋಲಿಸ್ ಇಲಾಖೆಯ ಮೇಲಾಧಿಕಾರಿಗಳಿಂದ ಜನಪ್ರತಿನಿಧಗಳಿಂದ ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ.

ಇಲಾಖೆಯಿಂದ 37 ವರ್ಷದ ಪ್ರಾಮಾಣಿಕ ಸೇವೆಗೆ ಪೋಲಿಸ್ ಕಮಿಷನರ್‍ರವರಿಂದ "ಬೆಂಗಳೂರು ರತ್ನ ಪ್ರಶಸ್ತಿ" ಪಡೆದಿದ್ದಾರೆ. ಯಾವುದೇ ಲೋಪದೋಷವಿಲ್ಲದೆ ನಿವೃತ್ತಿಯನ್ನು ಪಡೆದಿದ್ದಾರೆ. ಇವರು ತಮ್ಮ ಅಧಿಕಾರದಲ್ಲಿದ್ದಾಗಲ್ಲೂ ಸಹ ಬಡವರ ಪರ ಕನಿಕರ ಅಶಕ್ತ ವರ್ಗದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು.

ಪ್ರಸ್ತುತ 2013ರ ವಿಧಾನಸಭಾ ಚುನಾವಣೆಯಲ್ಲಿ ವಾರ್ಡ್ ನಂ-13ರ ನೂತನ ಅಧ್ಯಕ್ಷರಾದ ಎನ್.ಲೋಕೇಶ್‍ರವರ ಜೊತೆಯಲ್ಲಿ ಜನಪ್ರಿಯ ಶಾಸಕರಾದ ಎಸ್.ಮುನಿರಾಜು ಪರ ಸಕ್ರೀಯವಾಗಿ ತನ್ನ ಆರೋಗ್ಯವನ್ನು ಲೆಕ್ಕಿಸದೆ ಹಗಲು ರಾತ್ರಿಯೇನ್ನದೆ ಶ್ರಮ ಪಟ್ಟು ದುಡಿದಿದ್ದಾರೆ. ಎನ್.ಲೋಕೇಶ್‍ರವರ ಜೊತೆಗೊಡಿ ಚುನಾವಣೆಯಲ್ಲಿ ದುಡಿದು ಶ್ರೀ ಎಸ್.ಮುನಿರಾಜುರವರ ಗೆಲುವಿಗೆ ಕಾರಣರಾಗಿದ್ದಾರೆ. ಈಗ ಬೀದಿ ದೀಪಗಳು, ಕೊಳಚೆ ಚರಂಡಿಗಳು, ಚುನಾವಣ ಗುರುತಿನಚೀಟಿಗಳು, ಬಿಪಿಎಲ್ ಕಾರ್ಡ್‍ಗಳ ಬಗ್ಗೆ ದೂರು ಬಂದರೆ ಸ್ಪಂದಿಸುತ್ತಾರೆ. ಅದೇರೀತಿ ಕುಡಿಯುವ ನೀರಿಗೆ ಹೆಚ್ಚಿನ ಅಧ್ಯತೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಹೆಚ್ಚಿನ ಜವಾಬ್ದರಿಯುತ ಹುದ್ದೆಯನ್ನು ನೀಡಿ ಗೌರವಿಸ ಬೇಕಿz.

More Information Visit: www.tdasarahalli.in

Photo Gallery

 
Home | About Lokesh | About Constituency | News and Events | Gallery | Contact Me

Copyright © 2014 N. Lokesh All Rights Reserved. Powered by CreativeZENS Technologies