ಎನ್.ಲೋಕೇಶ್, ಬಿ.ಬಿ.ಎಂ.ಪಿ. ಕಾರ್ಪೊರೇಟರ್. ಮಲ್ಲಸಂದ್ರ ವಾರ್ಡ್ ನಂ-13


ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾರ್ಡಿನ ಬಡಜನತೆಯ ಅಪ್ತರಕ್ಷಕ, ವಾರ್ಡ್ ನಂ-13ರ ಮೌಲ್ಯಯುತ ಸಮಾಜ ಸೇವಕ ನೊತನ ಅಧ್ಯಕ್ಷರು, ಅಭಿವೃದ್ದಿಯ ಸರಾದಾರ ಎನ್.ಲೋಕೇಶ್.

ಮೂಲತಹ ದೊಡ್ಡಬಳಾಪುರ ತಾಲ್ಲೋಕಿನ ದೊಡ್ಡಬೆಳವಂಗಲ ಹೋಬಳಿಯ ಸಕ್ಕರೆ ಗೊಲ್ಲಹಳ್ಳಿ ಗ್ರಾಮದ ಸರಳ ಸಜ್ಜನ ಸುಸಂಸ್ಕøತ ಮನೆತನದ ಕುಟುಂಬದಲ್ಲಿ 07-05-1980ರಲ್ಲಿ ಜನಿಸಿದರು. ಇವರ ತಂದೆ ಶ್ರೀ ನಾಗರಾಜುರವರು ತಾಯಿ ಶ್ರೀಮತಿ ರಾಮಕ್ಕನವರು, ಈ ದಂಪತಿಗಳ ಜೇಷ್ಠ ಪುತ್ರರಾಗಿ ಜನಿಸಿದವರು ಎನ್.ಲೋಕೇಶ್. ಇವರ ತಮ್ಮ ಬಾಲ್ಯದ ವಿದ್ಯಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೆ ಮುಗಿಸಿ ಮುಂದಿನ ವೃತ್ತಿ ಶಿಕ್ಷಣ ಕೋರ್ಸ್ ಐ.ಟಿ.ಐ.ವಿದ್ಯಭ್ಯಾಸವನ್ನು ಸರ್ಕಾರಿ ಐ.ಟಿ.ಐ ತರಬೇತಿ ಕೇಂದ್ರ, ಗೊರಗುಂಟ್ಟೆಪಾಳ್ಯ, ಬೆಂಗಳೂರು. ಇಲ್ಲಿ ಮುಗಿಸಿ ತದನಂತರ ತಮ್ಮ ವೃತ್ತಿ ಜೀವನವನ್ನು ಮುಂದುವರಿಸುತ್ತಿದ್ದಾರೆ.

"ಭಗವಂತ ಕೈಕೊಟ್ಟ ಕೊಡಲಿಕ್ಕಂತ" ಎಂಬಂತೆ ತನ್ನ ಶ್ರಮದಿಂದ ದುಡಿದ ಬಹುಪಾಲು ಹಣವನ್ನು ಬಡವರ ಅಶಕ್ತ ವರ್ಗದವರ ಪರ ತಮನ್ನು ತೊಡಗಿಸಿಕೊಂಡರು, ಅನೇಕ ವರ್ಷಗಳಿಂದ ಸಮಾಜಸೇವೆಯನ್ನು ಮಾಡುತ್ತಾ ಬಡವರಿಗೆ ಆರ್ಥಿಕ ಸಹಾಯ ಹಸ್ತ ನೀಡುತ್ತಾ ಬಂದಿರುತ್ತಾರೆ, ಬಡ ಶಾಲಾ ಮಕ್ಕಳಿಗೆ ಶಾಲಾ ಶುಲ್ಕ ನೀಡುತ್ತಾ ಸಹಾಯ ಹಸ್ತ ನೀಡುತ್ತಿದ್ದಾರೆ. 2013ರ ವಿಧಾನಸಭಾ ಚುನಾವಣೆಗೆ ಬಿ.ಜೆ.ಪಿ ಪಕ್ಷದ ಅಭ್ಯರ್ಥಿಯಾಗಿದ್ದು, ಆಲಿ ಶಾಸಕರು ಆಗಿದ್ದಂತಹ ಶ್ರೀ ಎಸ್.ಮುನಿರಾಜುರವರ ಪರ ಚುನಾವಣ ಪ್ರಚಾರಕ್ಕಾಗಿ ಮಲ್ಲಸಂದ್ರ ವಾರ್ಡಿನ ಮುಖಂಡರು, ಕಾರ್ಯಕರ್ತರು ಹಾಗೂ ನೂರಾರು ಜನರ ಹಿಂಡನ್ನು ಕಟ್ಟಿಕೊಂಡು ಹಗಲಿರುಳು ಶ್ರಮವಹಿಸಿ ಬಿ.ಜೆ.ಪಿ ಪರ ಚುನಾವಣ ಪ್ರಚಾರ ನಡೆಸಿದರು. ಈ ಪರಿಶ್ರಮದ ಫಲವಾಗಿ ಈ ಭಾಗದಲ್ಲಿ ಬಿ.ಜೆ.ಪಿಗೆ ಅತ್ತಿ ಹೆಚ್ಚು ಬಹುಮತ ಬರಲು ಎನ್.ಲೋಕೇಶ್‍ರವರು ಕಾರಣಕರ್ತರಾಗಿರುತ್ತಾರೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್. ಮುನಿರಾಜುರವರು ಇವರ ವ್ಯಕ್ತಿತ್ವವನ್ನು ಮೆಚ್ಚಿ ಅವರ ಆಡಳಿತ ಹಾಗೂ ಅಭಿವೃದ್ದಿ ಕಾರ್ಯಗಳನ್ನು ನೋಡಿ 2013ರ ವಿಧಾನಸಭಾ ಚುನಾವಣೆ ಕೇವಲ 11 ದಿವಸಗಳು ಮಾತ್ರ ಬಾಕಿ ಉಳಿದಿದ್ದವು ಆಗ ಜನಪ್ರಿಯ ಶಾಸಕರಾದ ಎಸ್. ಮುನಿರಾಜುರವರು ಬಿ.ಜೆ.ಪಿ ಪಕ್ಷಕ್ಕೆ ಆಹ್ವಾನಸಿದರು ಆಗ ಎನ್.ಲೋಕೇಶ್‍ರವರು ತನ್ನ ಆಪಾರ ಸ್ನೇಹಿತರು ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಅಧಿಕೃತವಾಗಿ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಯಾದರು. 11 ದಿವಸಗಳಲ್ಲಿ ಮಲ್ಲಸಂದ್ರ ವಾರ್ಡಿನಲ್ಲಿ ಕಾರ್ಯಕರ್ತರೊಂದಿಗೆ ಮಿಂಚಿನ ಸಂಚಲನ ನಡೆಸಿ ಎಸ್.ಮುನಿರಾಜುರವರ ಗೆಲುವಿಗೆ ಸಹಾಕಾರಿಯಾಗಿದ್ದಾರೆ. ಬಿ.ಜೆ.ಪಿ ಪಕ್ಷವು ತನಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಬಾಯಿಸಿದ್ದಾರೆ, ಎನ್.ಲೋಕೇಶ್‍ರವರಿಗೆ ಅಂತಹ ಎದೆಗಾರಿಕೆ ಇದೆ ಎಂದು ತಿಳಿದು ಜನಪ್ರಿಯ ಶಾಸಕರಾದ ಎಸ್. ಮುನಿರಾಜುರವರು ಹಾಗೂ ಮಲ್ಲಸಂದ್ರ ವಾರ್ಡಿನ ಕಾರ್ಪೋರೇಟರ್ ಆದ ಶ್ರೀಮತಿ ಶಶಿ ಶಿವಕುಮಾರ್,ಸಮನ್ವಯ ಸಮಿತಿ ಸದಸ್ಯರುಗಳು ಇವರನ್ನು ಮಲ್ಲಸಂದ್ರ ವಾರ್ಡ್‍ನ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ದಿನಾಂಕ:03-07-2013ರಂದು ಸಾಯಿ ಕಲ್ಯಾಣ ಮಂಟಪದಲ್ಲಿ ಅದ್ದೂರಿ ಕಾರ್ಯಕ್ರಮದಲ್ಲಿ ಎನ್.ಲೋಕೇಶ್‍ರವರಿಗೆ ಅಧ್ಯಕ್ಷರ ಅಧಿಕಾರವನ್ನು ನೀಡಲಾಯಿತ್ತು, ಇದೇ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಎರಡನೇ ಬಾರಿ ಜಯಬೇರಿ ಬಾರಿಸಿದ ಎಸ್.ಮುನಿರಾಜು ದಂಪತಿಗಳಿಗೆ ಅದ್ದೂರಿ ಸನ್ಮಾನ ಸಮಾರಂಭ ಹಾಗೂ ಇವರ ಕುಟುಂಬ ಮತ್ತು ಕಾರ್ಯಕರ್ತರಿಂದ ಹಾಗೂ ಬಾಲಾಜಿ ಡೆವಲ್ಪರ್ಸ್ ಪಾಲುದಾರರಾದ ಜಿ.ವೆಂಕಟೇಶ್‍ರವರ ನೇತೃತ್ವದಲ್ಲಿ ಅದ್ದೂರಿ ಸನ್ಮಾನ, ಹೂವಿನ ಸುರಿಮಳೆ , ಪ್ರೀತಿಯ ಸುರಿಮಳೆ, ಹಾಗೂ ಮಾಲಾರ್ಪಣೆಯನ್ನು ಮಾಡಲಾಯಿತು. ದಾಸರಹಳ್ಳಿ ಇತಿಹಾಸದಲ್ಲಿ ಇದೇ ಮುದಲ ಬಾರಿ ಪಕ್ಷದ ಮುಖಂಡರಿಂದ ಅದ್ದೂರಿ ಸಮಾರಂಭವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಎನ್.ಲೋಕೇಶ್‍ರವರು ಮಲ್ಲಸಂದ್ರ ವಾರ್ಡಿನ ನಾಗರೀಕ ಬಂದುಗಳಿಗೆ ಬಂಪರ್ ಕೊಡುಗೆಯಾಗಿ ವಾರ್ಡಿನ ಪ್ರತಿ ಬೀದಿ ಬೀದಿಗಳಿಗೆ ಸ್ವಚ್ಛವಾದ ಕುಡಿಯುವ ನೀರಿನ ಟ್ಯಾಂಕರ್‍ಗಳನ್ನು ಬಿಡಲಾಗಿದೆ. ಇದು ವಾರ್ಡಿನ ಎಲ್ಲಾ ಸಮುದಾಯದವರಿಗೂ ಉಪಯೋಗವಾಗಿದೆ. ಹೊಲಿಗೆ ಯಂತ್ರಗಳನ್ನು ತರಿಸಿ ಮಹಿಳೆಯರಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ, ಇದರ ಜೊತೆಯಲ್ಲಿ ಉಚಿತ ಬ್ಯೂಟಿಷಿಯನ್ ತರಬೇತಿ, ಇಂಗ್ಲೀಷ್ ಕಲಿಕಾ ತರಬೇತಿ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ.

More Information Visit: www.tdasarahalli.in

Latest Video
Photo Gallery

 
Home | About Lokesh | About Constituency | News and Events | Gallery | Contact Me

Copyright © 2014 N. Lokesh All Rights Reserved. Powered by CreativeZENS Technologies